ಕರ್ನಾಟಕದಲ್ಲಿ ಆರೋಗ್ಯ ಭಾಗ್ಯ ಹೇಗಿದೆ? ...

ಕರ್ನಾಟಕ ಆರೋಗ್ಯ ಭಾಗ್ಯ ಬಡವ ಶ್ರೀಮಂತ, ವರ್ಗ ಸಮುದಾಯಗಳ ಭೇದವಿಲ್ಲದೇ ರಾಜ್ಯದ ಸಮಸ್ತ ನಾಗರಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವ ಯುನಿವರ್ಸಲ್ ಹೆಲ್ತ್ ಕವರೇಜ್ ಯೋಜನೆ ‘‘ಆರೋಗ್ಯ ಭಾಗ್ಯ’’ ನವೆಂಬರ್ 1 ರಿಂದ ರಾಜ್ಯದಲ್ಲೇ ಜಾರಿಗೆ ಬರಲಿದ್ದು, ಈ ಮಾದರಿಯ ಯೋಜನೆಯನ್ನು ಜಾರಿಗೊಳಿಸುವ ಪ್ರಥಮ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.ಈ ಯೋಜನೆಯಡಿ ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲಿರುವ 1.40 ಕೋಟಿ ಕುಟುಂಬಗಳ ಪೈಕಿ 1.05 ಕೋಟಿ ಕುಟುಂಬಗಳನ್ನು ಆದ್ಯತಾ ವಲಯದಲ್ಲಿ ಗುರುತಿಸಲಾಗಿದ್ದು, ಈ ಕುಟುಂಬಗಳು ಆಧಾರ್ ಜತೆ ಲಿಂಕ್ ಹೊಂದಿರುವ ಯುನಿವರ್ಸಲ್ ಹೆಲ್ತ್ ಕಾರ್ಡ್ ಪಡೆದು ಯಾವುದೇ ಪ್ರೀಮಿಯಂ ಇಲ್ಲದೇ ಆರೋಗ್ಯ ಸೇವೆ ಪಡೆಯಲಿವೆ.ಪ್ರಥಮ, ತುರ್ತು ಹಾಗೂ ದ್ವಿತಿಯ ಹಂತದ ಚಿಕಿತ್ಸೆಗಳನ್ನು ರಾಜ್ಯ ಸರ್ಕಾರದ ಒಟ್ಟು 50 ಸಾವಿರ ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡಲಾಗುತ್ತದೆ ಹಾಗೂ 500 ತೃತಿಯ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ಯೋಜನೆಯಡಿ ಒದಗಿಸಲಾಗುವುದು. ತುರ್ತು ಸೇವೆಗಳಾದ ಅಪಘಾತ ಮತ್ತು ಶಸ್ತ್ರ ಚಿಕಿತ್ಸೆ ಸಂಬಂಧಿ ಸೇವೆಗಳನ್ನು ತುರ್ತಾಗಿ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ ಮೊದಲು-ಪಾವತಿ ನಂತರ’ ನೀತಿಯಡಿ ಒದಗಿಸಲಾಗುವುದು. ಸರಾಸರಿ 25 ಸಾವಿರ ರು.ವರೆಗಿನ ವೆಚ್ಚವನ್ನು ತುರ್ತು ಸೇವೆಯಡಿ ನೀಡಲಾಗುವುದು. ತುರ್ತು ಚಿಕಿತ್ಸೆ ಬಳಿಕ 48 ಗಂಟೆಗಳ ನಂತರ ಅಗತ್ಯವಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಅವಕಾಶವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆ ಶುಲ್ಕ ಮತ್ತು ವಿವಿ‘ ಸೇವೆಗಳ ದರಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ನಿಗದಿಯಾಗಲಿವೆ. ಈ ಸಂಬಂ‘ ತಿದ್ದುಪಡಿ ಕಾಯ್ದೆಗೆ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಕಾಯ್ದೆ ತಿದ್ದುಪಡಿ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
Romanized Version
ಕರ್ನಾಟಕ ಆರೋಗ್ಯ ಭಾಗ್ಯ ಬಡವ ಶ್ರೀಮಂತ, ವರ್ಗ ಸಮುದಾಯಗಳ ಭೇದವಿಲ್ಲದೇ ರಾಜ್ಯದ ಸಮಸ್ತ ನಾಗರಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವ ಯುನಿವರ್ಸಲ್ ಹೆಲ್ತ್ ಕವರೇಜ್ ಯೋಜನೆ ‘‘ಆರೋಗ್ಯ ಭಾಗ್ಯ’’ ನವೆಂಬರ್ 1 ರಿಂದ ರಾಜ್ಯದಲ್ಲೇ ಜಾರಿಗೆ ಬರಲಿದ್ದು, ಈ ಮಾದರಿಯ ಯೋಜನೆಯನ್ನು ಜಾರಿಗೊಳಿಸುವ ಪ್ರಥಮ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.ಈ ಯೋಜನೆಯಡಿ ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲಿರುವ 1.40 ಕೋಟಿ ಕುಟುಂಬಗಳ ಪೈಕಿ 1.05 ಕೋಟಿ ಕುಟುಂಬಗಳನ್ನು ಆದ್ಯತಾ ವಲಯದಲ್ಲಿ ಗುರುತಿಸಲಾಗಿದ್ದು, ಈ ಕುಟುಂಬಗಳು ಆಧಾರ್ ಜತೆ ಲಿಂಕ್ ಹೊಂದಿರುವ ಯುನಿವರ್ಸಲ್ ಹೆಲ್ತ್ ಕಾರ್ಡ್ ಪಡೆದು ಯಾವುದೇ ಪ್ರೀಮಿಯಂ ಇಲ್ಲದೇ ಆರೋಗ್ಯ ಸೇವೆ ಪಡೆಯಲಿವೆ.ಪ್ರಥಮ, ತುರ್ತು ಹಾಗೂ ದ್ವಿತಿಯ ಹಂತದ ಚಿಕಿತ್ಸೆಗಳನ್ನು ರಾಜ್ಯ ಸರ್ಕಾರದ ಒಟ್ಟು 50 ಸಾವಿರ ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡಲಾಗುತ್ತದೆ ಹಾಗೂ 500 ತೃತಿಯ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ಯೋಜನೆಯಡಿ ಒದಗಿಸಲಾಗುವುದು. ತುರ್ತು ಸೇವೆಗಳಾದ ಅಪಘಾತ ಮತ್ತು ಶಸ್ತ್ರ ಚಿಕಿತ್ಸೆ ಸಂಬಂಧಿ ಸೇವೆಗಳನ್ನು ತುರ್ತಾಗಿ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ ಮೊದಲು-ಪಾವತಿ ನಂತರ’ ನೀತಿಯಡಿ ಒದಗಿಸಲಾಗುವುದು. ಸರಾಸರಿ 25 ಸಾವಿರ ರು.ವರೆಗಿನ ವೆಚ್ಚವನ್ನು ತುರ್ತು ಸೇವೆಯಡಿ ನೀಡಲಾಗುವುದು. ತುರ್ತು ಚಿಕಿತ್ಸೆ ಬಳಿಕ 48 ಗಂಟೆಗಳ ನಂತರ ಅಗತ್ಯವಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಅವಕಾಶವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆ ಶುಲ್ಕ ಮತ್ತು ವಿವಿ‘ ಸೇವೆಗಳ ದರಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ನಿಗದಿಯಾಗಲಿವೆ. ಈ ಸಂಬಂ‘ ತಿದ್ದುಪಡಿ ಕಾಯ್ದೆಗೆ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಕಾಯ್ದೆ ತಿದ್ದುಪಡಿ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.Karnataka Aarogya Bhagya Badava Shreemantha Varga Samudayagala Bhedavillade Rajyada Samastha Nagarikarige Aarogya Rakshane Odagisuva Yunivarsal Health Kavarej Yojane ‘‘arogya Bhagy’’ Navembar 1 Rinda Rajyadalle Jarige Baraliddu Ee Madariya Yojaneyannu Jarigolisuva Prathama Rajyavagi Karnataka Horahommalide Ee Yojaneyadi Rajyada 1.40 Kothi Kutumbagalige Anukulavagalide Aarogya Bhagya Yojaneyadi Aarogya Seve Padeyaliruva 1.40 Kothi Kutumbagala Paiki 1.05 Kothi Kutumbagalannu Adyatha Valayadalli Guruthisalagiddu Ee Kutumbagalu Adhar Jathe Link Hondiruva Yunivarsal Health Chord Padedu Yavude Premium Illade Aarogya Seve Padeyalive Prathama Turthu Hagu Dvithiya Hanthada Chikithsegalannu Rajya Sarkarada Ottu 50 Savira Hasigegala Sarkari Aspathregalu Maththu Sarkari Vaidyakeeya Kalejugalalli Needalaguththade Hagu 500 Trithiya Hanthada Chikithse Needalaguththade Ulida Sevegalannu Khasagi Aspathregala Mukhanthara Yojaneyadi Odagisalaguvudu Turthu Sevegalada Apaghatha Maththu Shasthra Chikithse Sambandhi Sevegalannu Turthagi Sameepada Sarkari Athava Khasagi Aspathregalalli ‘chikithse Modalu Pavathi Nanthar’ Neethiyadi Odagisalaguvudu Sarasari 25 Savira Rue Varegina Vechchavannu Turthu Seveyadi Needalaguvudu Turthu Chikithse Balika 48 Gantegala Nanthara Agathyaviddalli Sarkari Athava Khasagi Aspathrege Sthalanthara Madalu Avakashavide Khasagi Aspathregalalli Needuva Chikithse Shulka Maththu VV‘ Sevegala Daragalu Karnataka Khasagi Vaidyakeeya Sansthegala Kaydeyadi Nigadiyagalive Ee Samban‘ Tiddupadi Kaydege Janti Sadana Samithi Rachaneyagiddu Kayde Tiddupadi Balikavashte Ee Bagge Anthima Nirdhara Tegedukollalu Sachiva Samputa Sabhe Nirdhariside
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬೆಂಗಳೂರು, ಆಗಸ್ಟ್ 28 : '' ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್'' ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಭಾಗ್ಯ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಚಿಕಿತ್ಸೆ ಬಳಿಕ ಪಾವತಿ ವಾಕ್ಯದಡಿಯಲ್ಲಿ ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸುವ ಆರೋಗ್ಯ ಭಾಗ್ಯ ಯೋಜನೆಯನ್ನು ನವೆಂಬರ್ 1 ರಿಂದ ಜಾರಿಗೆ ತಂದರು. ರೈತ ಕುಟುಂಬದವರು, ಶಿಕ್ಷಕರು, ಅನುದಾನಿತ ಶಾಲೆಯ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕ್ರಮದ ಕಾರ್ಯಕರ್ತೆಯರು, ಇತರ ವರ್ಗದವರು, ಅಸಂಘಟಿತ ಕಾರ್ಮಿಕರು, ಆಟೋ ಚಾಲಕರು, ಕೂಲಿಗಳು, ಗಣಿ ಕಾರ್ಮಿಕರು, ಕಸ ಸಂಗ್ರಹಣಾಕಾರರು, ನಿರ್ಮಾಣ ಕಾರ್ಮಿಕರು, ನೇಕಾರರು, ಪೌರ ಕಾರ್ಮಿಕರು, ನರೇಗಾ ಯೋಜನೆಯ ಕಾರ್ಮಿಕರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಪ್ರಾಣಿಯ ದಾಳಿಗೆ ಬಲಿಯಾದವರು, ಮಾಧ್ಯಮದವರು, ಸಹಕಾರ ಸಂಘ-ಸಂಸ್ಥೆಗಳ ಸದಸ್ಯರು, ಸರ್ಕಾರಿ ನೌಕರರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.
Romanized Version
ಬೆಂಗಳೂರು, ಆಗಸ್ಟ್ 28 : '' ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್'' ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಭಾಗ್ಯ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಚಿಕಿತ್ಸೆ ಬಳಿಕ ಪಾವತಿ ವಾಕ್ಯದಡಿಯಲ್ಲಿ ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸುವ ಆರೋಗ್ಯ ಭಾಗ್ಯ ಯೋಜನೆಯನ್ನು ನವೆಂಬರ್ 1 ರಿಂದ ಜಾರಿಗೆ ತಂದರು. ರೈತ ಕುಟುಂಬದವರು, ಶಿಕ್ಷಕರು, ಅನುದಾನಿತ ಶಾಲೆಯ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕ್ರಮದ ಕಾರ್ಯಕರ್ತೆಯರು, ಇತರ ವರ್ಗದವರು, ಅಸಂಘಟಿತ ಕಾರ್ಮಿಕರು, ಆಟೋ ಚಾಲಕರು, ಕೂಲಿಗಳು, ಗಣಿ ಕಾರ್ಮಿಕರು, ಕಸ ಸಂಗ್ರಹಣಾಕಾರರು, ನಿರ್ಮಾಣ ಕಾರ್ಮಿಕರು, ನೇಕಾರರು, ಪೌರ ಕಾರ್ಮಿಕರು, ನರೇಗಾ ಯೋಜನೆಯ ಕಾರ್ಮಿಕರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಪ್ರಾಣಿಯ ದಾಳಿಗೆ ಬಲಿಯಾದವರು, ಮಾಧ್ಯಮದವರು, ಸಹಕಾರ ಸಂಘ-ಸಂಸ್ಥೆಗಳ ಸದಸ್ಯರು, ಸರ್ಕಾರಿ ನೌಕರರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. Bengaluru Agast 28 : '' Khasagi Aspathregalalli Modalu Rogigalige Treat Meant Nantharave Payment Emba Ghosh Vakyadondige Rajya Sarkarada Mahathvada Aarogya Bhagya Yojanege Sachiva Samputa Sabhe Oppige Needide Rajyada 1.40 Kothi Kutumbagalige Sarkari Maththu Ayda Khasagi Aspathregalalli Modalu Chikithse Balika Pavathi Vakyadadiyalli Sarvarigu Aarogya Rakshane Odagisuva Aarogya Bhagya Yojaneyannu Navembar 1 Rinda Jarige Tandaru Raitha Kutumbadavaru Shikshakaru Anudanitha Shaleya Shikshakaru Anganavadi Asha Karyakartheyaru BC Uta Karyakramada Karyakartheyaru Ithara Vargadavaru Asanghatitha Karmikaru Auto Chalakaru Kuligalu Gani Karmikaru Kasa Sangrahanakararu Nirmana Karmikaru Nekararu Paura Karmikaru Narega Yojaneya Karmikaru Parishishta Jathi Parishishta Pangadadavaru Praniya Dalige Baliyadavaru Madhyamadavaru Sahakara Sangha Sansthegala Sadasyaru Sarkari Naukararu Ee Yojaneya Vyapthige Olapaduththare
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Aarogya Bhagya Hegide ,


vokalandroid